Ticker

6/recent/ticker-posts

ಖ್ಯಾತ ಹಿರಿಯ ಚಿತ್ರ ನಿರ್ದೇಶಕ ಹಾಗು ಗೀತೆರಚನಕಾರರಾದ ಗೀತಪ್ರೀಯ ನಿಧನ

ಕನ್ನಡದ ಖ್ಯಾತ ಹಿರಿಯ ಚಿತ್ರ ನಿರ್ದೇಶಕ ಹಾಗು ಗೀತೆರಚನಕಾರರಾದ ಗೀತಪ್ರೀಯ [Geethapriya] ಅವರು ಇಂದು ಸಂಜೆ ನಿಧನ ಹೊಂದಿದರು.

ಕಳೆದ ಹಲವಾರು ದಿನಗಳಿಂದ ಆನಾರೋಗ್ಯದಿಂದ ಬಳಲುತಿದ್ದ ಗೀತಪ್ರೀಯ ಆವರನ್ನು ಬೆಂಗಳೂರಿನ ಕೆ.ಸಿ.ಜನರಲ್‌ ಆಸ್ಪತ್ರೆಗೆ ದಾಖಲಿಸಲಾಗಿತ್ತು ಇಂದು ಸಂಜೆ ವೇಳೆಗೆ ಆರೋಗ್ಯದಲ್ಲಿ ಏàರುಪೇರಾಗಿ ನಿಧನ ಹೊಂದಿದರು. ಅವರಿಗೆ ೮೪ ವರ್ಷ ವಯಸ್ಸಾಗಿತ್ತು.

1932 ಜೂನ್‌ 15ರಂದು ಜನಿಸಿದ  ಗೀತಪ್ರೀಯ, 1954ರಲ್ಲಿ ಸಿನಿಮಾ ರಂಗಕ್ಕೆ ಪಾದಾರ್ಪಣೆ ಮಾಡಿದ ಗೀತಪ್ರೀಯ ಸುಮಾರು 40 ಕನ್ನಡ ಸಿನಿಮಾಗಳನ್ನು ನಿರ್ದೇಶಿಸಿ , 250ಕ್ಕೂ ಹೆಚ್ಚು ಗೀತೆರಚನೆ ಮಾಡಿದ ಹೆಗ್ಗಳಿಕೆ ಗೀತಪ್ರೀಯರದ್ದು.

ದುರ್ಗಾಷ್ಠಮಿ, ನಾರಿ ಮುನಿದರೆ ಮಾರಿ, ಬೆಸುಗೆ, ಮೌನಗೀತೆ, ಪುಟಾಣಿ ಏಜೆಂಟ್‌ 123 , ಮಣ್ಣಿನ ಮಗ , ಬೆಸುಗೆ , ಹೊಂಬಿಸಿಲು , ಶ್ರಾವಣ ಸಂಭ್ರಮ ಮುಂತಾದ ಚಿತ್ರಗಳನ್ನು ಗೀತಪ್ರಿಯ ಆವರು ನಿರ್ದೇಶಿಸಿದ್ದಾರೆ. ಶ್ರಾವಣ ಸಂಭ್ರಮ ಅವರ ನಿರ್ದೇಶನದ ಕೊನೆಯ ಚಿತ್ರ.

ಮಣ್ಣಿನ ಮಗ ಚಿತ್ರಕ್ಕೆ ರಾಷ್ಟ್ರ ಪ್ರಶಸ್ತಿ ಸೇರಿದಂತೆ, ರಾಜ್ಯ ಪ್ರಶಸ್ತಿ ,ಪುಟ್ಟಣ್ಣ ಕಣಗಲ್‌ ಪಶಸ್ತಿ, ಸರೋಜಾ ದೇವಿ ಪ್ರಶಸ್ತಿಗಳಿಗೆ ಭಾಜನರಾಗಿದ್ದರು.

Post a Comment

0 Comments