Ticker

6/recent/ticker-posts

ಏನೆಂದು ನಾ ಹೇಳಲಿ.. ಈ ನಿನ್ನ ಹುಚ್ಚು ಪ್ರೀತಿಗೆ : ಅ 2

ನನ್ನ ಮೌನ ಮೌನವಾಗಿಯೇ  ಉಳಿಯಿತು . ಅವರು ನನ್ನ ಏನು ಕೇಳಲಿಲ್ಲ  ಬಹುಶ  ನನ್ನ ಮೌನ  ಅವರಿಗೆ ಅರ್ಥ ಆಗಿರ ಬಹುದು ಅಂದುಕೊಂಡೆ.

ಮನಸಿಗ್ಗೆ ಎಲ್ಲೊ ಒಂದು ಕಡೆ ಬೇಸರ, ಆದರು ಹುಡ್ಗನ ಹುಡ್ಕೋ ಪ್ರಯತ್ನ ಬಿಡಲಿಲ್ಲ.. ಆದಷ್ಟು ಬೇಗ ನನ್ನ ಡ್ರೀಮ್ ಬಾಯ್ ನ ಹುಡ್ಕೊಬೇಕು ಎಂದು ಸತತ ಪ್ರಯತ್ನ ಮಾಡುತಿದ್ದಂತೆ, ಮತ್ತೊಂದು  ಪ್ರಪೋಸಲ್. ಹುಡ್ಗನ ಪ್ರೊಫೈಲ್ ಹಾಗು ಫೋಟೋ ನೋಡಿ ಒಪ್ಪಿಕೊಂಡ ನಾನು ಅವರನ್ನು  ಒಮ್ಮೆ ಬೇಟಿ ಮಾಡುವದಾಗಿ ತಿಳಸಿದೆ ತಿಳಿಸಿದ ಹಾಗೆ ಅವರ, ನನ್ನ ಬೇಟಿ ಆಯಿತು. ಅವರನ್ನು ಬೇಟಿಯಾದ  ನಾನು ಅವರ ಉತ್ತರಕ್ಕಾಗಿ  ಆ ದಿನ ಪೂರ್ತಿ ಕಾಯಿದ್ರು ಅವರಿಂದ ಮಾತ್ರ ಉತ್ತರ ಬರಲೇ ಇಲ್ಲ . 

ಕಾರಣ ತಿಳಿಯದ ನಾನು ಕಾರಣವನ್ನು ಯೋಚಿಸ್ತು ಕೂತೆ.   ಆಗ ನನ್ನ ಮನ್ಸಿಗ್ಗೆ ಬಂದಿದ್ದು ನನ್ನ ಮೈ ಬಣ್ಣ. ಹುಡುಗ ಬೆಳ್ಳಗೆ ಇದ್ದ ಕಾರಣ ನನ್ನ ಗೋದಿ ಬಣ್ಣ ಅವನಿಗೆ ಉತ್ತರ ನೀಡದಂತೆ ಮಾಡಿರಬಹುದು ಅಂದೊಕೊಂಡೆ. ಆದರೆ ನನ್ನ ಮನಸ್ಸಿನ  ಆಲೋಚನೆ ತಪ್ಪು ಎಂದು ತಿಳಿದಿದ್ದು ಅವರ ಮನೆಯಿoದ ಹುಡುಗಿ ಒಪ್ಪಿಗೆ ಆಗಿದ್ದಾಳೆ  ಎಂದು, ೫ ದಿನದ  ನಂತರ  ಕರೆ ಬಂದಾಗ.

ನಂಬಲಾಗದ್ದಿದ್ರು ನಂಬಲೇಬೇಕಾದ ಸನ್ನಿವೇಶ. ಒಪ್ಪಿಗೆಯಾ ಮಾತು ಕೇಳಿ ನನ್ನ ಮನಸ್ಸು ಕುಣಿದಾಡಿತು . ಕೊನೆಗೂ ನಾನು ಕನಸಿನಲ್ಲಿ ಕಾಣುತಿದ್ದ ಹುಡುಗ ಇವನೇ ಇರಬೇಕು ಅಂದು ಕೊಂಡು,  ಮುಗುಳ್ ನಗುತಾ ಮುಂದಿನ ದಿನಗಳನ್ನು ಕಲ್ಪನೆ ಮಾಡಿಕೊಂಡೆ. ಮನೆ ಅವರಿಗೂ ಅವರ ಒಪ್ಪಿಗೆಯಾ ವಿಷಯ ತಿಳಿಸಿ ಹುಡ್ಗನ ಮನೆಗೆ ಹೋಗುವದಾಗಿ ಹೇಳಿದೆ. ನನ್ನ ಮಾತಿಗೆ ಸಮ್ಮತಿಸಿ ಅವರು ಹುಡ್ಗನ ಮನೆಗೆ ಹೋಗಿ, ಹುಡ್ಗನ ಮನೆಯವರನ್ನು ನಮ್ಮ ಊರಿಗೆ ಕರೆದಾಗ ಅವರ ಉತ್ತರ ನಮ್ಮನ್ನು  ಗೊಂದಲಕ್ಕೆ  ಸಿಲುಕಿಸಿತು.

ಮುಂದುವರಿಯುದು..... 

Post a Comment

2 Comments

  1. This one is really an amazing series, which brings an excitement & curiosity thinking what next..Well tried!

    ReplyDelete
  2. Nice writing, resembles my frnd story . Pls continue it

    ReplyDelete

Comment is awaiting for approval