Ticker

6/recent/ticker-posts

ಇರುಳಿಗಿಂದು ಜನ್ಮ ದಿನ

ಇಂದು,
ಇರುಳಿಗೆ ಜನ್ಮ ದಿನವಂತೆ.
ಶುಭ ಕೋರಿ, ಗೀಚಿರುವೆ
ಕೆಲವು ಸಾಲುಗಳನ್ನು, ಮನ ಬಂದಂತೆ.

ಇರುಳಲ್ಲಿ, ಚಂದ್ರನು ಬಂದು
ಬೆಳಗುವನು ಧರೆಯನು.
ಹಗಲಲ್ಲೇ, ನಿಶೆಯೆ ಶಶಿಯಾಗಿ ಬಂದು
ಬೆಳಗುತಿದೆ, ಕಛೇರಿಯನು.

ನಿಶೆಯೆ, ನಿನಗೆ ಜನುಮ
ದಿನದ, ಶುಭಾಶಯ.
ಸದಾ ನೀ ನಗುತಲಿರು
ಅದೇ, ನಮ್ಮ ಆಶಯ.

ನಿರ್ಮಲವಾದ, ಮನಸಿರಲಿ
ಶಾಲೀನತೆಯು, ಜೊತೆಗಿರಲಿ
ಕಷ್ಟವು ನಿನಗೆ, ಬರದಿರಲಿ
ಯಶಸ್ಸು, ನಿನ್ನನ್ನು ಬಿಡದಿರಲಿ

ನಿತ್ಯ ಹೋರಾಟದ, ಜೀವನದ ಕಾಡಿನಲಿ
ಶಾರ್ದುಲವಾಗಿ ಮುನ್ನುಗ್ಗುವ, ಧೈರ್ಯವಿರಲಿ
ಅಡೆತಡೆ, ತೊಂದರೆಗಳು, ಎಷ್ಟೇ ಬರಲಿ
ಅವುಗಳನ್ನು ಭೇಟೆಯಾಡುವ, ಸ್ಥೈರ್ಯವಿರಲಿ

ನಿಸ್ವಾರ್ಥ ಸ್ನೇಹವನು, ತೆರೆದಿಡು
ಶಾತ್ರವವನ್ನು, ನೀ ಮರೆತುಬಿಡು
ಸಕಾರಾತ್ಮಕ, ಭಾವನೆಗೆ ಕಟ್ಟುಪಡು
ನಕಾರಾತ್ಮಕ, ಚಿಂತೆಗಳ ಸುಟ್ಟುಬಿಡು

ನಿನ್ನ ಮಂದಹಾಸವೇ ನಿನಗೆ
ಶಾತಕುಂಭದ ಆಭರಣ
ತಾಳ್ಮೆ , ಸೌಜನ್ಯ, ಸನ್ನಡತೆ
ಇವುಗಳಾಗಲಿ ನಿನ್ನ ಭೂಷಣ

ನಿನ್ನ ಕನಸುಗಳು ಕೈಗೂಡಿ
ಶಾ೦ತಿಯು ಮನದಲ್ಲಿ, ಮನೆ ಮಾಡಿ
ಜಯ, ವಿಜಯಗಳು, ಒಡಗೂಡಿ
ಜೀವನವ ಅನುಭವಿಸು, ಸಂತಸದಿ ಹಾಡಿ

ನಿನ್ನ ಬಾಳಿನ ಎಲ್ಲೆಗಳ ಮೀರಿ
ಶಾರಿಕೆಯಂತೆ, ಬಾನಲ್ಲಿ ಹಾರಿ
ಜಗದ ಸುಖವನ್ನೆಲ್ಲಾ ನೀ ಹೀರಿ
ಕಂಪ ಸೂಸು, ನಗೆಯ ಬೀರಿ

ನಿನ್ನ ಜನುಮ ದಿನವನು, ಮುಂದೆ
ಶಾಕಟದ ಜನತೆ, ಹಬ್ಬವಾಗಿ ಆಚರಿಸಿ
ತಮ್ಮ ಮಕ್ಕಳಿಗೆ, ನಿನ್ನ ಹೆಸರನ್ನಿಟ್ಟು
ಬೆಳೆಸಲಿ, ನಿನ್ನ ಸಾಧನೆಯ ತೋರಿಸಿ

ನಿನಗನಿಸಬಹುದು, ಅತಿಯಾದ ವರ್ಣನೆ ಎಂದು
ಶಾರ್ವರಿಯೇ, ನನಗು ಹಾಗೆ ಅನಿಸುತ್ತಿದೆ. ಆದರೆ
ಅತಿಯಾದ ವರ್ಣನೆಯೆ, ಕವಿತೆಯ ಅಂದ ಚೆಂದ
ನಂಬಿಕೆ, ಛಲವಿದ್ದರೆ, ಎಲ್ಲವೂ ಸಾದ್ಯ ನಿನ್ನಿಂದ

ನಿಶೆಯೆ,  ನಿನಗೆ ಜನುಮ
ದಿನದ, ಶುಭಾಶಯ.
ಸದಾ  ನೀ, ನಲಿಯುತಲಿರು
ಅದೇ, ನಮ್ಮ ಆಶಯ.

ಇಂದು,
ಇರುಳಿಗೆ ಜನ್ಮ ದಿನವಂತೆ.
ಸೂರ್ಯ, ಚಂದ್ರ, ನಕ್ಷತ್ರಾದಿಗಳು
ಶುಭ ಕೋರಿ ಹಾರೈಸುತಿರುವರಂತೆ.
                                                   -  ಸೆಂದಿಲ್

More Links

ದುರಾಸೆ
ವಿನಂತಿ
ಅಜ್ಜನ ನೆನಪು 
ಓ ಮನವೇ
ಮೊದಲ ತೊದಲ ಬರಹ












Post a Comment

4 Comments

  1. thanks a lot sendil, for writing such a wonderful lines for me:) ;)

    ReplyDelete
  2. Awesome Sendil :) The way of words that has been used is really good :) In every paragraph that has been used Nisha is really Awesome :) I love it.

    ReplyDelete

Comment is awaiting for approval